Sri Venkata Krishna Kshetra Temple

Suguna Maala - Kannada Monthly Magazine

Suguna Mala

                                                                                              click on the above image to go to Suguna Maala


  ಜಗತ್ಗುರು ಮದ್ವಾಚಾರ್ಯರಿಂದ ಪ್ರತಿಷ್ಟೆಗೊಂಡ ಉಡುಪಿ ಶ್ರೀ ಕೃಷ್ಣನ ಆರಾಧಕರಾಗಿ ಆಚಾರ್ಯರ ತತ್ವಜ್ಞಾನ ಪರಂಪರೆಯ ಪ್ರತಿನಿಧಿಯಾಗಿ ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಶ್ರೀಪಾದರ ಕನಸಿನಕೂಸು ಸುಗುಣಮಾಲಾ ಮಾಸಪತ್ರಿಕೆ ಇದೀಗ ೨೭ ಸಂವತ್ಸರಗಳನ್ನು ದಾಟಿದೆ .

  ೧೨ರ ಬಾಲ್ಯದಲ್ಲೆ ಸನ್ಯಾಸವನ್ನು ಸ್ವೀಕರಿಸಿದ ಪುತ್ತಿಗೆ ಶ್ರೀಪಾದರು ಜ್ಞಾನ ತಪಸ್ವಿಗಳೆಂದೇ ಹೆಸರಾಗಿದ್ದ ಪಲಿಮಾರು , ಭಂಡಾರಕೇರಿ , ಉಭಯ ಮಠಾಧೀಶರಾಗಿದ್ದ ಶ್ರೀ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಅಂತೇವಾಸಿಯಾಗಿ ಅದಮಾರಿನ ಗುರುಕುಲದಲ್ಲಿ ಅನೇಕ ವರ್ಷಗಳಕಾಲ ವೇದಾಂತ ಅಧ್ಯಯನವನ್ನು ನಡೆಸಿ ಜ್ಞಾನನಿಧಿಯಾಗಿ ಮೂಡಿಬಂದರು . ೨೫ರ ತರುಣ ಯತಿಯ ಅನೇಕ ಕ್ರಿಯಾತ್ಮಕ ಯೋಚನೆಗಳಿಂದ ಹಾಗೆಯೇ ಪ್ರಭಾವಪೂರ್ಣ ಬರವಣಿಗೆಯ ಶೈಲಿಯನ್ನು ಗಮನಿಸಿದ್ದ ಹಿರಿಯ ಶ್ರೀಪಾದರು ನೀಡಿದ ಮಾರ್ಗದರ್ಶನದಂತೆ ೧೯೮೬ರ ಸಮಯದಲ್ಲಿ ಸುಗುಣಮಾಲಾ ಮಾಸ ಪತ್ರಿಕೆಯ ಪ್ರಾರಂಭಗೊಂಡಿತು .

  ಪ್ರಸಿದ್ದ ವಿದ್ವಾಂಸರಾದ ಉತ್ತಮ ಬರಹಗಾರರು ಆದ ನಮ್ಮ ಹೆಮ್ಮೆಯ ತುಳುನಾಡಿನ ತತ್ವಜ್ಞಾನಿ ಆಚಾರ್ಯಮದ್ವರನ್ನು ಚಿಂತಕರಿಗೆ ವಿಷೇಶವಾಗಿ ತಲುಪಿಸಿದ ಕೀರ್ತಿಯುಳ್ಳ ವಿದ್ಯಾವಾಚಸ್ಪತಿ ಬನ್ನಂಜೆ ಗೊವಿಂದಾಚಾರ್ಯರ ಸಮರ್ಥ ನಿರ್ದೇಶನದಲ್ಲಿ ವಿದ್ವಾಂಸರಾದ ಎಮ್ . ರಾಜಗೋಪಾಲಾಚಾರ್ಯರ ಸಂಪಾದಕತನದಲ್ಲಿ ಈ ಮಾಸಪತ್ರಿಕೆಯು ಹೊಸತನ ತರುವ ರೀತಿಯಲ್ಲಿ ಪ್ರಾಚೀನ ಆರ್ಷಜ್ಞಾನವನ್ನು ಎಲ್ಲರಿಗೂ ಮನದಟ್ಟಾಗುವಂತೆ ಯಾವುದೇ ಮತೀಯ , ಪ್ರಾಂತೀಯ , ಆಸ್ಥೆ ಆವೇಷಗಳಿಲ್ಲದೆ ವಿಶೇಷವಾಗಿ ಆಚಾರ್ಯ ಮಧ್ವರ ತತ್ವವಾದದ ಪಂಚಾಂಗದಲ್ಲಿ ಲೇಖನಗಳನ್ನು ಪ್ರಸ್ತುತಪಡಿಸುವ ಉದ್ದೇಶದೊಂದಿಗೆ ಹೊರಟ ಪತ್ರಿಕೆಗೆ ನಾಡಿನಾದ್ಯಂತ ಉತ್ತಮ ಪ್ರತಿಕ್ರಿಯೆಯು ದೊರಕಿದ್ದು ಶ್ರೀಪಾದರನ್ನು ಈ ನಿಟ್ಟಿನಲ್ಲಿ ಇನ್ನಷ್ಟು ಜಾಗೃತರಾಗಿ ಕಾರ್ಯನಿರ್ವಹಿಸುವಲ್ಲಿ ಸಫಲತೆಯನ್ನು ಕಂಡಿತ್ತು .